[ಕನ್ನಡ] Earth Day 2024 ----- ಭೂಮಿ ದಿನದ ಶುಭಾಶಯಗಳು, ಎಲ್ಲರಿಗೂ! ಭೂಮಿಯ ದಿನವು ಭೂಮಿಯ ಆಚರಣೆಯ ವಾರ್ಷಿಕ ಕಾರ್ಯಕ್ರಮವಾಗಿದೆ ಮತ್ತು ಪರಿಸರ ಸಂರಕ್ಷಣೆಗೆ ಬೆಂಬಲವನ್ನು ಪ್ರದರ್ಶಿಸುತ್ತದೆ. ಪ್ರತಿ ವರ್ಷ ಏಪ್ರಿಲ್ ೨೨ ರಂದು ಆಚರಿಸಲಾಗುತ್ತದೆ ಮತ್ತು ಜಾಗತಿಕ ಘಟನೆ ಆಗಿದೆ, ನೂರ ತೊಂಬತ್ತಕ್ಕೂ ಹೆಚ್ಚು ದೇಶಗಳಲ್ಲಿಆಚರಿಸಲಾಗುತ್ತದೆ. ೨೦೨೪ ರ ಅಧಿಕೃತ ಥೀಮ್ “ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ಸ್” - ನಮ್ಮ ಆರೋಗ್ಯ ಮತ್ತು ನಮ್ಮ ಭೂಮಿಯ ಆರೋಗ್ಯವನ್ನು ರಕ್ಷಿಸಲು ಪ್ಲಾಸ್ಟಿಕ್‌ಗಳ ಉತ್ಪಾದನೆಯಲ್ಲಿ ತೀವ್ರ ಕಡಿತದ ಕರೆ. ನಾವು ಈ ವರ್ಷವನ್ನು ಆಚರಿಸುತ್ತಿರುವಾಗ, ಭೂಮಿ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ರಾಜೆಕ್ಟ್ ಗಳನ್ನು ರಚಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ! ಪ್ರಾರಂಭಿಸಲು ಐಡಿಯಾಗಳನ್ನು ಹುಡುಕುತ್ತಿರುವಿರಾ? - ಭೂಮಿ ದಿನವನ್ನು ಆಚರಿಸಲು ಕಾರ್ಡ್ ಮಾಡಿ - ಮರಗಳನ್ನು ನೆಡುವ ಬಗ್ಗೆ ಗೇಮ್ ನ್ನು ವಿನ್ಯಾಸಗೊಳಿಸಿ - ರೀಸೈಕ್ಲೇಬಲ್ ವಸ್ತುಗಳನ್ನು ಬಳಸಿಕೊಂಡು ಕಲಾಕೃತಿಯನ್ನು ರಚಿಸಿ ಮತ್ತು ಸ್ಕ್ರ್ಯಾಚ್‌ನಲ್ಲಿ ಅದನ್ನು ಜೀವಂತಗೊಳಿಸಿ! - ಭೂಮಿ ದಿನದ ಇತಿಹಾಸದ ಬಗ್ಗೆ ಇತರರಿಗೆ ಬಗ್ಗೆ ತಿಳಿಯಲು ಸಹಾಯ ಮಾಡಲು ಪ್ರಾಜೆಕ್ಟ್ಅನ್ನು ರಚಿಸಿ - ಸಾಗರವನ್ನು ಸ್ವಚ್ಛಗೊಳಿಸುವ ಬಗ್ಗೆ ಗೇಮ್ಅನ್ನು ವಿನ್ಯಾಸಗೊಳಿಸಿ - ರೀಸೈಕ್ಲಿಂಗ್ ಬಗ್ಗೆ ಇತರರು ತಿಳಿದುಕೊಳ್ಳಲು ಸಹಾಯ ಮಾಡಲು ಟ್ಯುಟೋರಿಯಲ್ ರಚಿಸಿ - ಪ್ಲಾಸ್ಟಿಕ್ ಮಾಲಿನ್ಯದ ಮತ್ತು ಪರಿಹಾರದ ಭಾಗವಾಗಲು ನಾವು ಹೇಗೆ ಸಹಾಯ ಮಾಡಬಹುದು ಕುರಿತು ಪ್ರಾಜೆಕ್ಟ್ಅನ್ನು ರಚಿಸಿ - ಪರಿಸರ ಸ್ನೇಹಿಯಾಗಿರುವುದು ಎಂದರೆ ಏನೆಂದು ಕಲಿಯುವ ನೀರಿನ ಬಾಟಲಿಯ ಬಗ್ಗೆ ಅನಿಮೇಷನ್ ಮಾಡಿ - "ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ಸ್" ಥೀಮ್ ಬಗ್ಗೆ ಯೋಚಿಸಿ ಮತ್ತು ಅದಕ್ಕೆ ಸಂಬಂಧಿಸಿದ ಪ್ರಾಜೆಕ್ಟ್ಅನ್ನು ಮಾಡಿ! ನೆನಪಿಡಿ, ಇವು ಕೇವಲ ಸಲಹೆಗಳು! ನಿಮ್ಮ ಸ್ವಂತ ಆಲೋಚನೆಗಳೊಂದಿಗೆ ಬರಲು ನಿಮಗೆ ಸ್ವಾಗತ, ಅಥವಾ ಈಗಾಗಲೇ ಸ್ಟುಡಿಯೊದಲ್ಲಿರುವ ಪ್ರಾಜೆಕ್ಟ್ ಗಳಿಂದ ಸ್ಫೂರ್ತಿ ಪಡೆಯಿರಿ! ಭೂಮಿಯ ದಿನದ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೋಡಿ. ನೀವು ಏನು ರಚಿಸುವಿರಿ? =^..^= - - - - FAQ ಭೂಮಿ ದಿನ ಎಂದರೇನು? ಭೂಮಿ ದಿನವು ಭೂಮಿಯ ಆಚರಣೆಯಲ್ಲಿ ಮತ್ತು ಪರಿಸರ ಸಂರಕ್ಷಣೆಗೆ ಬೆಂಬಲವನ್ನು ಪ್ರದರ್ಶಿಸಲು ವಾರ್ಷಿಕ ಕಾರ್ಯಕ್ರಮವಾಗಿದೆ. ೧೯೭೦ ರಲ್ಲಿ ಆಧುನಿಕ ಪರಿಸರ ಚಳುವಳಿಯ ಪ್ರಾರಂಭದ ವಾರ್ಷಿಕೋತ್ಸವವನ್ನು ಗುರುತಿಸಲು ಇದನ್ನು ಪ್ರತಿ ವರ್ಷ ಏಪ್ರಿಲ್ ೨೨ ರಂದು ಆಚರಿಸಲಾಗುತ್ತದೆ. ಈ ವರ್ಷದ ಭೂ ದಿನದ ಥೀಮ್ ಏನು? ಈ ವರ್ಷದ ಭೂ ದಿನದ ಅಧಿಕೃತ ಥೀಮ್ "ಪ್ಲಾನೆಟ್ ವರ್ಸಸ್ ಪ್ಲ್ಯಾಸ್ಟಿಕ್ಸ್" ಆಗಿದೆ. ೨೦೪೦ ರ ವೇಳೆಗೆ ಪ್ಲಾಸ್ಟಿಕ್ ಉತ್ಪಾದನೆಯನ್ನು ಶೇ. ೬೦ರಷ್ಟು ಕಡಿತಗೊಳಿಸಿ ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ಮುಕ್ತ ಭವಿಷ್ಯ ನಿರ್ಮಿಸುವ ಗುರಿ ಹೊಂದಿದ್ದು, ಮಾನವ ಮತ್ತು ಗ್ರಹಗಳ ಆರೋಗ್ಯದ ದೃಷ್ಟಿಯಿಂದ ಪ್ಲಾಸ್ಟಿಕ್‌ನ ಅಂತ್ಯಕ್ಕೆ ಕರೆ ನೀಡಲಾಗಿದೆ. ನಾನು ಹೇಗೆ ತೊಡಗಿಸಿಕೊಳ್ಳಬಹುದು? ಭೂಮಿಯನ್ನು ಆಚರಿಸಲು ಮತ್ತು ಹೆಚ್ಚು ಪರಿಸರ ಪ್ರಜ್ಞೆಯನ್ನು ಹೊಂದಲು ಸಾಕಷ್ಟು ಮಾರ್ಗಗಳಿವೆ. ಭೂಮಿಯ ದಿನದ ಸಂಘಟಕರಿಂದ ಕೆಲವು ಸಲಹೆಗಳು: ಪ್ಲಾಸ್ಟಿಕ್ ಮಾಲಿನ್ಯವು ಪರಿಸರದಲ್ಲಿ ನಾವು ಎದುರಿಸುತ್ತಿರುವ ದೊಡ್ಡ ಕಾಳಜಿಗಳಲ್ಲಿ ಒಂದಾಗಿದೆ. ಹೆಚ್ಚು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಮತ್ತು ಕಡಿಮೆ ಏಕ-ಬಳಕೆಯ ಪ್ಲಾಸ್ಟಿಕ್‌ಗಳನ್ನು ಬಳಸುವುದು ನಾವೆಲ್ಲರೂ ಸಹಾಯ ಮಾಡಲು ಮಾಡಬಹುದು. - ಮರ ನೆಡಿ! - ನಮ್ಮ ಗ್ರಹವನ್ನು ರಕ್ಷಿಸುವ ಪ್ರಾಮುಖ್ಯತೆಯ ಬಗ್ಗೆ ಇತರರಿಗೆ ತಿಳಿಯಲು ಸಹಾಯ ಮಾಡಲು ನಿಮ್ಮ ಧ್ವನಿಯನ್ನು ಬಳಸಿ - ನಮ್ಮ ಕಡಲತೀರಗಳು, ಸಾಗರಗಳು, ನದಿಗಳು, ಸರೋವರಗಳು, ಹಾದಿಗಳು, ಉದ್ಯಾನವನಗಳು ಇತ್ಯಾದಿಗಳನ್ನು ಕಸದಿಂದ ಸ್ವಚ್ಛವಾಗಿಡಲು ಸಹಾಯ ಮಾಡಿ. - ಸಹಾಯ ಮಾಡಲು ನೀವು ಬೇರೆ ಯಾವ ಮಾರ್ಗಗಳನ್ನು ಯೋಚಿಸಬಹುದು? ಅದರ ಬಗ್ಗೆ ಪ್ರಾಜೆಕ್ಟ್ಅನ್ನು ರಚಿಸಿ ಮತ್ತು ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ! ನಾನು ಎಲ್ಲಿ ಹೆಚ್ಚು ಕಲಿಯಬಹುದು? ಇನ್ನಷ್ಟು ತಿಳಿದುಕೊಳ್ಳಲು ಈ ಸ್ಟುಡಿಯೋದಲ್ಲಿನ ಪ್ರಾಜೆಕ್ಟ್ ಗಳನ್ನು ಪರಿಶೀಲಿಸಿ ಮತ್ತು/ಅಥವಾ ಹೆಚ್ಚಿನ ವಿವರಗಳನ್ನು ನೀಡುವ ಅಧಿಕೃತ ಅರ್ಥ್ ಡೇ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.earthday.org/earth-day-2024/
All the translation by me @Techyleaf