(ಕನ್ನಡ) ನಕ್ಷತ್ರ ನೋಡುವವರು- ಸ್ಕ್ರಾಚ್ ಕ್ಯಾಂಪ್ ೨೦೨೩ ----- ಸ್ವಾಗತ, ಕ್ಷೀರಪಥದ ಅನ್ವೇಷಕರೆ, ಸ್ಕ್ರಾಚ್ ಕ್ಯಾಂಪ್‌ನ ಮೊದಲನೆಯ ವಾರಕ್ಕೆ ಸ್ವಾಗತ: ಬಾಹ್ಯಾಕಾಶ, ನಕ್ಷತ್ರಗಳು ಮತ್ತು ಆಚೆ! ಈ ವಾರ, ನಾವು ಹಿಂದಕ್ಕೆ ಹೆಜ್ಜೆ ಹಾಕುತ್ತಿದ್ದೇವೆ ಮತ್ತು ಬ್ರಹ್ಮಾಂಡದ ಮೂಲಕ ಪ್ರಯಾಣವನ್ನು ಮಾಡುತ್ತಿದ್ದೇವೆ. ಥೀಮ್ "ಸ್ಟಾರ್ ಗೇಜರ್ಸ್" ಆಗಿದೆ ಮತ್ತು ನಾವು ಇಲ್ಲಿಯವರೆಗೆ ಬಾಹ್ಯಾಕಾಶದ ಬಗ್ಗೆ ಕಲಿತ ಎಲ್ಲವನ್ನೂ ಅನ್ವೇಷಿಸುತ್ತೇವೆ. ನಮ್ಮ ರಾತ್ರಿ ಆಕಾಶವನ್ನು ಅಲಂಕರಿಸುವ ನಕ್ಷತ್ರಪುಂಜಗಳು, ಕಪ್ಪು ರಂಧ್ರಗಳ ಹಿಂದಿನ ರಹಸ್ಯಗಳು ಅಥವಾ ಬಾಹ್ಯಾಕಾಶದ ವಿಶಾಲತೆಯ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಭೂತಕಾಲಕ್ಕೆ ಧುಮುಕಲು ಮತ್ತು ನಮ್ಮ ಮುಂದೆ ಬಂದಿರುವ ಖಗೋಳಶಾಸ್ತ್ರಜ್ಞರ ಮಾರ್ಗವನ್ನು ಅನುಸರಿಸಲು ಈಗ ನಿಮಗೆ ಚಾನ್ಸ್ ಇದೆ! ಈ ವಾರ, ಖಗೋಳಶಾಸ್ತ್ರ, ಬಾಹ್ಯಾಕಾಶ ಪರಿಶೋಧನೆಯ ಇತಿಹಾಸ ಮತ್ತು ನಾವು ವರ್ಷಗಳಿಂದ ಕಂಡುಹಿಡಿದ ಆಕಾಶಕಾಯಗಳಿಗೆ ಸಂಬಂಧಿಸಿದ ಪ್ರಾಜೆಕ್ಟ್ ಗಳನ್ನು ರಚಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಪ್ರಾರಂಭಿಸಲು ನೀವು ಐಡಿಯಾಗಳನ್ನು ಹುಡುಕುತ್ತಿದ್ದೀರಾ? - ಸಂವಾದಾತ್ಮಕ ನಕ್ಷತ್ರಪುಂಜ ಮಾರ್ಗದರ್ಶಿಯನ್ನು ವಿನ್ಯಾಸಗೊಳಿಸಿ - ಪ್ರಮುಖ ಬಾಹ್ಯಾಕಾಶ ಪರಿಶೋಧನೆಯ ಮೈಲಿಗಲ್ಲುಗಳ ಸಂವಾದಾತ್ಮಕ ಟೈಮ್‌ಲೈನ್ ಅನ್ನು ರಚಿಸಿ - ಆರಂಭಿಕ ಖಗೋಳಶಾಸ್ತ್ರಜ್ಞರಾಗಿ ಜೀವನವನ್ನು ಕಲ್ಪಿಸಿಕೊಂಡು ಕಥೆಯನ್ನು ಬರೆಯಿರಿ - ದೂರದರ್ಶಕ ಸಿಮ್ಯುಲೇಟರ್ ಮಾಡಿ - ನಕ್ಷತ್ರದ ಜೀವನ ಚಕ್ರವನ್ನು ವಿವರಿಸುವ ಅನಿಮೇಷನ್ ರಚಿಸಿ - ನಕ್ಷತ್ರಗಳು, ಗೆಲಕ್ಸಿಗಳು, ಗ್ರಹಗಳು, ಇತ್ಯಾದಿ ವಿವಿಧ ರೀತಿಯ ಆಕಾಶಕಾಯಗಳ ಬಗ್ಗೆ ಇತರರಿಗೆ ಕಲಿಯಲು ಸಹಾಯ ಮಾಡಲು ತಿಳಿಸುವ ಪ್ರಾಜೆಕ್ಟ್ ಅನ್ನು ಮಾಡಿ - ರಾತ್ರಿ ಆಕಾಶದಲ್ಲಿ ವಿವಿಧ ನಕ್ಷತ್ರಗಳ ಪೆನ್ ಪ್ರಾಜೆಕ್ಟ್ ಅನ್ನು ರಚಿಸಿ ನೆನಪಿರಲಿ, ನಿಮಗೆ ಇವು ಕೇವಲ ಸಲಹೆಗಳು! ನಿಮ್ಮ ಸ್ವಂತ ಐಡಿಯಾಗಳೊಂದಿಗೆ ಬರಲು ಅಥವಾ ಈಗಾಗಲೇ ಸ್ಟುಡಿಯೊದಲ್ಲಿರುವ ಪ್ರಾಜೆಕ್ಟ್ಗಳಿಂದ ಸ್ಫೂರ್ತಿ ಪಡೆಯಲು ನಿಮಗೆ ಸ್ವಾಗತ! ನೀವು ಏನು ರಚಿಸುವಿರಿ? =^..^=
Translation by me @Techyleaf Template by @ScratchCat